Back

ⓘ ಕಲೆ, ವಿವರ್ಣನ. ಕಲೆ ಎಂದರೆ ಅದು ಯಾವ ಮೇಲ್ಮೈ, ವಸ್ತು, ಅಥವಾ ಸಾಧನದ ಮೇಲೆ ಕಾಣಿಸಿಕೊಳ್ಳುತ್ತದೆಯೋ ಅದರಿಂದ ಸ್ಪಷ್ಟವಾಗಿ ವ್ಯತ್ಯಾಸ ಮಾಡಬಹುದಾದ ವಿವರ್ಣನ. ಕಲೆಗಳು ಎರಡು ಹೋಲಿಕೆಯಿಲ್ಲದ ವಸ್ತುಗ ..



ಕಲೆ (ವಿವರ್ಣನ)
                                     

ⓘ ಕಲೆ (ವಿವರ್ಣನ)

ಕಲೆ ಎಂದರೆ ಅದು ಯಾವ ಮೇಲ್ಮೈ, ವಸ್ತು, ಅಥವಾ ಸಾಧನದ ಮೇಲೆ ಕಾಣಿಸಿಕೊಳ್ಳುತ್ತದೆಯೋ ಅದರಿಂದ ಸ್ಪಷ್ಟವಾಗಿ ವ್ಯತ್ಯಾಸ ಮಾಡಬಹುದಾದ ವಿವರ್ಣನ. ಕಲೆಗಳು ಎರಡು ಹೋಲಿಕೆಯಿಲ್ಲದ ವಸ್ತುಗಳ ಪರಸ್ಪರ ರಾಸಯನಿಕ ಅಥವಾ ಭೌತಿಕ ಕ್ರಿಯೆಗಳಿಂದ ಉಂಟಾಗುತ್ತವೆ. ಬಣ್ಣ ಗುರುತಿಸುವಿಕೆಯನ್ನು ಜೀವರಾಸಾಯನಿಕ ಸಂಶೋಧನೆ, ಲೋಹದ ಬಣ್ಣವೂರಿಸುವಿಕೆ, ಮತ್ತು ಕಲೆಗೆ ಬಳಸಲಾಗುತ್ತದೆ. ಕಲೆಗಳು ಉದ್ದೇಶಪೂರ್ವಕವಾಗಿರಬಹುದು, ಸೂಚಕ ಕಲೆಗಳು, ಪ್ರಾಕೃತಿಕ ಕಲೆಗಳು, ಮತ್ತು ಆಕಸ್ಮಿಕ ಕಲೆಗಳು. ವಿಭಿನ್ನ ಪ್ರಕಾರಗಳ ವಸ್ತುಗಳ ಮೇಲೆ ವಿವಿಧ ವಸ್ತುಗಳಿಂದ ಬಣ್ಣದ ಗುರುತನ್ನು ಮಾಡಬಹುದು, ಮತ್ತು ಕಲೆ ಪ್ರತಿರೋಧವು ಆಧುನಿಕ ಉಡುಪು ತಯಾರಿಕೆಯಲ್ಲಿ ಒಂದು ಪ್ರಮುಖ ಗುಣಲಕ್ಷಣವಾಗಿದೆ.

ಮೇಲ್ಮೈ ಕಲೆಗಳು ಕಲೆ ರಚಿಸುವಿಕೆಯ ಪ್ರಾಥಮಿಕ ವಿಧಾನವಾಗಿವೆ. ಇದರಲ್ಲಿ ಕಲೆ ವಸ್ತುವನ್ನು ಮೇಲ್ಮೈ ಅಥವಾ ವಸ್ತುವಿನ ಮೇಲೆ ಸುರಿಯಲಾಗುತ್ತದೆ ಮತ್ತು ಅದು ಎಳೆಗಳಲ್ಲಿ, ರಂಧ್ರಗಳಲ್ಲಿ, ಕಚ್ಚುಗಳಲ್ಲಿ, ಅಥವಾ ಮೇಲ್ಮೈ ಮೇಲಿನ ಇತರ ಲೋಮನಾಳಾಕರ್ಷಣ ರಚನೆಗಳಲ್ಲಿ ಸಿಕ್ಕಿಬೀಳುತ್ತದೆ. ಸಿಕ್ಕಿಬಿದ್ದ ವಸ್ತುವು ಅಡಿಯಲ್ಲಿರುವ ವಸ್ತುವನ್ನು ಲೇಪಿಸುತ್ತದೆ, ಮತ್ತು ಕಲೆಯು ಅದರ ಸ್ವಂತ ಬಣ್ಣದ ಪ್ರಕಾರ ಬೆಳಕನ್ನು ಹಿಂದಕ್ಕೆ ಪ್ರತಿಫಲಿಸುತ್ತದೆ. ಬಣ್ಣ ಲೇಪಿಸುವುದು, ಚೆಲ್ಲಿದ ಆಹಾರ, ಮತ್ತು ದಾರುವಿನ ಕಲೆಗಳು ಈ ಸ್ವರೂಪದ್ದಾಗಿವೆ.

ಕಲೆಯ ಎರಡನೆಯ ವಿಧಾನವು ವಸ್ತು ಮತ್ತು ಕಲೆ ವಸ್ತುವಿನ ನಡುವಿನ ರಾಸಾಯನಿಕ ಅಥವಾ ಆಣ್ವಿಕ ಕ್ರಿಯೆಯನ್ನು ಒಳಗೊಳ್ಳುತ್ತದೆ. ಅನೇಕ ಪ್ರಕಾರಗಳ ನೈಸರ್ಗಿಕ ಕಲೆಗಳು ಈ ವರ್ಗದಲ್ಲಿ ಬರುತ್ತವೆ. ಅಂತಿಮವಾಗಿ, ವಸ್ತು ಮತ್ತು ಕಲೆ ವಸ್ತು ನಡುವೆ ಆಣ್ವಿಕ ಆಕರ್ಷಣೆ ಕೂಡ ಆಗಬಹುದು. ಇದು ಕೋವೇಲನ್ಸಿ ಬಂಧದಲ್ಲಿ ಹಿಡಿಯಲ್ಪಟ್ಟು ಹಿಡಿಯಲ್ಪಟ್ಟ ವಸ್ತುವಿನ ಬಣ್ಣವನ್ನು ತೋರಿಸುವುದನ್ನು ಒಳಗೊಳ್ಳುತ್ತದೆ.

ಅನೇಕ ಸಂದರ್ಭಗಳಲ್ಲಿ, ಕಲೆಗಳು ಶಾಖದಿಂದ ಪ್ರಭಾವಿತವಾಗುತ್ತವೆ ಮತ್ತು ಅಡಿಯಲ್ಲಿನ ವಸ್ತುವಿನೊಂದಿಗೆ ಬಂಧವನ್ನು ರಚಿಸುವಷ್ಟು ಪ್ರತಿಕ್ರಿಯಾತ್ಮಕವಾಗಬಹುದು. ಇಸ್ತ್ರಿ ಮಾಡುವುದು ಅಥವಾ ಅಜಲಧಾವನದಂತಹ ಅತಿಹೆಚ್ಚು ಶಾಖವು ತೆಗೆಯಬಲ್ಲ ಕಲೆಯ ಮೇಲೆ ರಾಸಾಯನಿಕ ಕ್ರಿಯೆಯನ್ನು ಉಂಟುಮಾಡಬಹುದು, ಮತ್ತು ಇದರಿಂದ ಅದನ್ನು ತೆಗೆಯಲು ಅಸಾಧ್ಯವಾದ ರಾಸಾಯನಿಕ ಸಂಯುಕ್ತವಾಗಿ ಪರಿವರ್ತಿಸುತ್ತದೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →